ಮಥುರಾ ಮೆನ್ಸ್ ಡ್ರೆಸ್ ಕೋಡ್, ವಿಟ್ಲ – ವಿಶೇಷ ಆಫರ್

ಮಥುರಾ ಮೆನ್ಸ್ ಡ್ರೆಸ್‌ಕೋಡ್ (Mathura Mens Dresscode), ವಿಟ್ಲದಲ್ಲಿ ವಿಶೇಷ ಆಫರ್!

​ವಿಟ್ಲದ ‘ಮಥುರಾ ಮೆನ್ಸ್ ಡ್ರೆಸ್‌ಕೋಡ್’ ಬಟ್ಟೆಯ ಅಂಗಡಿಯಲ್ಲಿ ಗ್ರಾಹಕರಿಗಾಗಿ ಆಕರ್ಷಕ ರಿಯಾಯಿತಿ ದರದಲ್ಲಿ ವಿಶೇಷ ಆಫರ್ ಘೋಷಿಸಲಾಗಿದೆ.

​ಆಫರ್ 1: 3 ಶರ್ಟ್‌ಗಳು ಕೇವಲ ₹999/- ಕ್ಕೆ ಲಭ್ಯ.
​ಆಫರ್ 2: 1 ಶರ್ಟ್ + 1 ಪ್ಯಾಂಟ್ (Pant) ಜೋಡಿಗೆ ₹999/-.

ಈ ಆಫರ್ ಜೂನ್ 06, 2026 ರಿಂದ ಜೂನ್ 20, 2026 ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.

ವಿಳಾಸ: ಮೊದಲನೇ ಮಹಡಿ, ಹೊಳ್ಳ ಕಾಂಪ್ಲೆಕ್ಸ್, ಖಾಸಗಿ ಬಸ್ ನಿಲ್ದಾಣದ ಹತ್ತಿರ, ವಿಟ್ಲ.

​ಸಂಪರ್ಕ ಸಂಖ್ಯೆ: 918197569772

​ನೀವು ಹೊಸ ಬಟ್ಟೆಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಿ.

ಪಕ್ಷದ ಶುದ್ಧೀಕರಣ ವಿಚಾರ… ಹೇಳಿಕೆ ತಿರುಚಲಾಗಿದೆ – ಡಿ. ವಿ. ಸದಾನಂದ ಗೌಡ

ಪಕ್ಷ ಶುದ್ಧೀಕರಣ ವಿಚಾರದಲ್ಲಿ ಪುತ್ತೂರು ನನ್ನ ಲೆವೆಲ್ನದ್ದಲ್ಲ ಎಂದು ಮಾಧ್ಯಮದ ಮುಂದೆ ನೀಡಿರುವ ಹೇಳಿಕೆಯನ್ನು ತಿರುಚಲಾಗಿದೆ. ಹಾಗೂ ಈ ಹೇಳಿಕೆಯನ್ನು ಅಪಾರ್ಥವಾಗುವ ರೀತಿಯಲ್ಲಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಚಾರಿತ್ರಿಯ ವಧೆ ಮಾಡುತ್ತಿರುವುದು ನೋವು ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ.

ಅದು ನನ್ನ ಮಟ್ಟದಲ್ಲಿ ನಿರ್ಧಾರವಾಗುವ ವಿಷಯವಲ್ಲ. ಈ ವಿಷಯದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಪಕ್ಷದ ಹಿರಿಯ ನಾಯಕರಿಗೆ ಸೇರಿದ್ದು, ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂಬುದಾಗಿತ್ತು ಎಂದು ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ ತಮ್ಮ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ, ಪುತ್ತೂರು ಹಾಗೂ ಪಕ್ಷದ ಬಗ್ಗೆ ನಿರ್ಲಕ್ಷ ಧೋರಣೆ ಹೊಂದಿರುವಂತೆ ತೋರಿಸಲಾಗುತ್ತಿದೆ ಎಂದು ಹೇಳಿದರು.

ಪಕ್ಷದ ನಾಯಕತ್ವ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ತಾನು ಬದ್ಧನಾಗಿದ್ದು ಪಕ್ಷದ ಹಿತಾಸಕ್ತಿಯೇ ತನ್ನ ಆದ್ಯತೆಯಾಗಿದೆ. ಪುತ್ತೂರು ಮತ್ತು ಪಕ್ಷದ ಬಗ್ಗೆ ತಮಗೆ ಅಪಾರ ಗೌರವವಿದ್ದು ರಾಜಕೀಯ ಜೀವನದಲ್ಲಿ ದೊರೆತ ಅವಕಾಶಗಳು ಹಾಗೂ ಬೆಂಬಲವನ್ನು ಸದಾ ಸ್ಮರಿಸುತ್ತೇನೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸದೆ ಅದರ ನಿಜವಾದ ಆಶಯವನ್ನು ಗಮನಿಸುವಂತೆ ಅವರು ಮನವಿ ಮಾಡಿದ್ದಾರೆ.

ಲಾಟರಿ ಖರೀದಿಸಿದ ಕೇರಳದ ವ್ಯಕ್ತಿಗೆ ವಂಚನೆ. – ಪ್ರಕರಣ ದಾಖಲು

ಕೇರಳ ಲಾಟರಿ ಬಹುಮಾನದ ಆಮಿಷವೊಡ್ಡಿ 1.85 ಲಕ್ಷ ರೂಪಾಯಿ ವಂಚಿಸಿದ ವ್ಯಕ್ತಿಯೊಬ್ಬನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ. 12 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ ಎಂದು ನಂಬಿಸಿ ಈ ವಂಚನೆ ನಡೆಸಲಾಗಿದೆ.

ಮೇ 29 ರಂದು ಫೇಸ್‌ಬುಕ್‌ನಲ್ಲಿ ಲಾಟರಿ ಜಾಹೀರಾತು ನೋಡಿ, ಅದರಲ್ಲಿದ್ದ ಸಂಖ್ಯೆಗೆ ಕರೆ ಮಾಡಿದ್ದ ಸಂತ್ರಸ್ತರಿಗೆ ನವೀನ್ ಎಂಬಾತ ಲಾಟರಿ ನಂಬರ್ ಕಳುಹಿಸಿದ್ದನು. ಕೇವಲ 100 ರೂ. ಹೂಡಿಕೆ ಮಾಡಿ 12 ಲಕ್ಷ ರೂ. ಬಹುಮಾನ ಗೆದ್ದಿರುವುದಾಗಿ ನಂಬಿಸಿದ ವಂಚಕರು, ನಂತರದ ಹಂತಗಳಲ್ಲಿ ದೀಪಕ್ ಮತ್ತು ರಾಜ್‌ಕುಮಾರ್ ಹೆಸರಿನ ಗೂಗಲ್ ಪೇ ಖಾತೆಗಳಿಗೆ ತೆರಿಗೆ ಮತ್ತು ಇತರೆ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಳ್ಳುತ್ತಾ ಬಂದರು.

​ಸಂದೇಹ ಬಂದು ಕಚೇರಿಯ ವಿಳಾಸ ಕೇಳಿದಾಗ ನಕಲಿ ಮ್ಯಾಪ್ ಕಳುಹಿಸಿ ನಂಬಿಸಿದ್ದ ವಂಚಕರು, ಕೊನೆಗೆ ಜೂನ್ 2 ರಂದು ಸಂತ್ರಸ್ತರು ಖುದ್ದಾಗಿ ತಿರುವನಂತಪುರದ ಲಾಟರಿ ಕಚೇರಿಗೆ ತೆರಳಿ ವಿಚಾರಿಸಿದಾಗ, ಅದು ಸಂಪೂರ್ಣ ಸುಳ್ಳು ಮತ್ತು ಫೇಕ್ ಲಾಟರಿ ಎಂಬುದು ತಿಳಿದುಬಂದಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.