ಬೆಳ್ತಂಗಡಿ : 2023 ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ತಡವಾಗಿ ಬೆಳಕಿಗೆ, ಪೊಲೀಸರಿಂದ ತನಿಖೆ

file photo

ಬೆಳ್ತಂಗಡಿ ಸಮೀಪದ ಡ್ಯಾಂ ಒಂದರ ಬಳಿ 2023ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ವೇಣೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ತಮ್ಮ ಮಗಳ ಮೇಲೆ ಸಂಬಂಧಿಕನೊಬ್ಬ ಹಾಗೂ ಆತನ ಸ್ನೇಹಿತನಿಂದ ದೌರ್ಜನ್ಯ ಮತ್ತು ಜೀವಬೆದರಿಕೆ ನಡೆದಿರುವುದನ್ನು ಪೋಷಕರು ಇತ್ತೀಚೆಗೆ ಗಮನಿಸಿ, ಜೂನ್ 23 ರಂದು ದೂರು ನೀಡಿದ್ದಾರೆ.
2023 ರಲ್ಲಿ, ಈ ಬಾಲಕರು ಬೆಳ್ತಂಗಡಿಯ ಡ್ಯಾಂ ಒಂದರ ಬಳಿಯಿರುವ ಕಟ್ಟಡಕ್ಕೆ ಸಂತ್ರಸ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದು ಹಾಗೂ ಬಾಲಕಿಗೆ ಜೀವಬೆದರಿಕೆ ಒಡ್ಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಈ ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 376, 376AB, 376DB, 506, 34 ಹಾಗೂ ಪೋಕ್ಸೋ ಕಾಯ್ದೆಯಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
