ಬಿಜೆಪಿ ಕುಂಬಳೆ ಪಂಚಾಯತ್ ನ ನೂತನ ಕಟ್ಟಡ ಎಂ.ಎಲ್ ಅಶ್ವಿನಿಯವರಿಂದ ಉದ್ಘಾಟನೆ

ಕುಂಬಳೆಯಲ್ಲಿ ನಡೆದ ಬಿಜೆಪಿ ಪಂಚಾಯತ್ ಸಮಿತಿಯ ನೂತನ ಕಚೇರಿ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅವರು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಮತ್ತು ಹಿರಿಯ ನಾಯಕರಾದ ವಿ. ರವೀಂದ್ರನ್ ಅವರು ಧ್ವಜಾರೋಹಣ ನೆರವೇರಿಸಿದರು. ಕುಂಬಳೆ ಪಂಚಾಯತ್ ದಕ್ಷಿಣ ಕ್ಷೇತ್ರ ಸಮಿತಿಯ ಅಧ್ಯಕ್ಷ ಸುಜಿತ್ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಜನಸಂಘ ಮತ್ತು ಬಿಜೆಪಿಯ ಹಿರಿಯ ಹಾಗೂ ಆರಂಭಿಕ ಕಾರ್ಯಕರ್ತರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸತೀಶ್ ಚಂದ್ರ ಭಂಡಾರಿ (ರಾಜ್ಯ ಸಮಿತಿ ಸದಸ್ಯ), ಸುಬ್ಬಯ್ಯ ರೈ (ತುರ್ತು ಹೋರಾಟಗಾರ ಮತ್ತು ಜನಸಂಘದ ಕಾರ್ಯಕರ್ತ), ಮುರಲೀಧರ ಯಾದವ್ (ಜಿಲ್ಲಾ ಉಪಾಧ್ಯಕ್ಷ), ವಸಂತಮಯ್ಯ (ಮಂಡಲ ಪ್ರಧಾನ ಕಾರ್ಯದರ್ಶಿ), ವಿಕ್ರಮ್ ಪೈ ಹಾಗೂ ಪ್ರೇಮಾವತಿ (ಮಂಡಲ ಉಪಾಧ್ಯಕ್ಷರು), ಶಿವಪ್ರಸಾದ್ ರೈ (ಕುಂಬಳೆ ಪಂಚಾಯತ್ ಉತ್ತರ ಕ್ಷೇತ್ರ ಸಮಿತಿ ಅಧ್ಯಕ್ಷ) ಸೇರಿದಂತೆ ಪಂಚಾಯತ್ ಪ್ರತಿನಿಧಿಗಳು, ವಿನೋದ್ ಕೊಯಿಪ್ಪಾಡಿ ಕಡಪರ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.


