ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿಶ್ವ ವರ್ಧನ್
ಪಾಟ್ನಾ, ಜೂ. 08 ಯುಪಿಎಸ್‌ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಈ ಪರೀಕ್ಷೆಗಾಗಿ ಕೆಲವರು ತಮ್ಮ ವೃತ್ತಿಯನ್ನೇ ತೊರೆಯುತ್ತಾರೆ. ಹೀಗೆ ತಮ್ಮ ನೇವೀಯ ವೃತ್ತಿಯನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆದು ರ್‍ಯಾಂಕ್ ನೊಂದಿಗೆ ಉತ್ತೀರ್ಣರಾಗಿದ್ದಾರೆ.

ವಿಶ್ವ ಅವರು ಪಾಟ್ನಾದ ಲೊಯೋಲಾ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದರು. ನಂತರ ಇಂಡಿಯನ್ ಮ್ಯಾರಿಟೈಮ್ ಯೂನಿವರ್ಸಿಟಿಯಲ್ಲಿ ನಾಟಿಕಲ್ ಸೈನ್ಸ್ನಲ್ಲಿ ಪದವಿ ಪಡೆದು, ಶಿಕ್ಷಣದ ನಂತರ, ಮರ್ಚೆಂಟ್ ನೇವಿಗೆ ಸೇರಿ ಕೆಮಿಕಲ್ ಟ್ಯಾಂಕರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ, 2019ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಯುಪಿಎಸ್‌ಸಿ ಪರೀಕ್ಷೆಯ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದರು.
2024ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು 101ನೇ ಅಖಿಲ ಭಾರತ ರ‍್ಯಾಂಕ್ ಗಳಿಸಿದರು. ಈ ಮೂಲಕ ಅನೇಕ ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ವಿಶ್ವ ಅವರು ಮಾದರಿಯಾಗಿದ್ದಾರೆ.








