ಮುಂಗಾರಿನ ವೈಫಲ್ಯದತ್ತ ಉಪಗ್ರಹ ಚಿತ್ರಗಳ ಸುಳಿವು: ಭಾರತದ ಆಕಾಶದಲ್ಲಿ ಮೋಡಗಳಿಲ್ಲದ ಗಂಭೀರ ಪರಿಸ್ಥಿತಿ

ಭಾರತದ ನೈಋತ್ಯ ಮುಂಗಾರು ಈ ಬಾರಿ ಆತಂಕಕಾರಿ ಮಟ್ಟದಲ್ಲಿ ದುರ್ಬಲವಾಗಿದೆ ಎಂದು ಇತ್ತೀಚಿನ ಉಪಗ್ರಹ ಚಿತ್ರಗಳು (EUMETSAT ಮತ್ತು INSAT-3DS) ದೃಢಪಡಿಸಿವೆ. ಈ ಕುರಿತ ಪ್ರಮುಖ ಅಂಶಗಳು ಇಲ್ಲಿವೆ:

ಮೋಡಗಳ ಕೊರತೆ: ಭಾರತದ ಮಧ್ಯ, ಪಶ್ಚಿಮ ಮತ್ತು ಪೆನಿನ್ಸುಲರ್ (ದ್ವೀಪಕಲ್ಪ) ಪ್ರದೇಶಗಳಲ್ಲಿ ಮುಂಗಾರಿಗೆ ಅಗತ್ಯವಾದ ದಟ್ಟವಾದ ಮೋಡಗಳ ಪಟ್ಟಿಗಳೇ ಕಾಣುತ್ತಿಲ್ಲ. ಹೆಚ್ಚಿನ ಭಾಗ ಒಣಹವೆಯಿಂದ ಕೂಡಿದೆ.

ಮುಂಗಾರಿನ ಎಂಜಿನ್ ಎಂದೇ ಕರೆಯಲ್ಪಡುವ ‘ಸೊಮಾಲಿ ಜೆಟ್’ (ತೇವಾಂಶ ಹೊತ್ತೊಯ್ಯುವ ಗಾಳಿ) ಮತ್ತು ಅಡ್ಡ-ಇಕ್ವೇಟರ್ ಹರಿವು ಬಹಳ ದುರ್ಬಲವಾಗಿದೆ.

ಪಶ್ಚಿಮ ಹಿಂದೂ ಮಹಾಸಾಗರದ ಮೇಲೆ ಉಂಟಾಗಿರುವ ಗಾಳಿಯ ಕುಸಿತದಿಂದಾಗಿ ಮೋಡಗಳ ರಚನೆಗೆ ಅಡ್ಡಿಯಾಗಿದೆ, ಇದು ಅರೇಬಿಯನ್ ಸಮುದ್ರದಿಂದ ಭಾರತದ ಕಡೆಗೆ ತೇವಾಂಶ ಸಾಗಣೆಯನ್ನು ಮಿತಿಗೊಳಿಸಿದೆ.

ಆತಂಕ: ಮುಂಗಾರು ಆರಂಭವಾಗಿ ಎರಡು ವಾರಗಳಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇದು ದೀರ್ಘಕಾಲದ ಮಳೆಯ ಕೊರತೆ ಮತ್ತು ಬರಗಾಲದ (Meteorological Drought) ಪರಿಸ್ಥಿತಿಯ ಕುರಿತು ಕೃಷಿ ವಲಯದಲ್ಲಿ ಮತ್ತು ಹವಾಮಾನ ತಜ್ಞರಲ್ಲಿ ಆತಂಕ ಮೂಡಿಸಿದೆ.

ಜೂನ್ ಅಂತ್ಯದ ವೇಳೆಗೆ ಮಳೆಯ ಮೋಡಗಳು ಸಕ್ರಿಯಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

​ಒಟ್ಟಾರೆಯಾಗಿ, ವಾತಾವರಣದ ಚಲನೆಗಳು ದುರ್ಬಲವಾಗಿರುವುದು ಮತ್ತು ಶಾಖದ ಅಲೆಗಳು ಹೆಚ್ಚಾಗಿರುವುದು ಈ ವರ್ಷದ ಮುಂಗಾರಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ಸರಕಾರದ ಹಿಂದೂ ದಮನಕಾರಿ ಧೋರಣೆ….ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಿಗೆ ಗಡಿಪಾರು ನೋಟೀಸ್

ಹರೀಶ ತಂದೆ ನಿಂಗಪ್ಪ ಹಾನಗಲ್ಲ, ಸಾ : ಅಕ್ಕಿಆಲೂರ ಚನ್ನವೀರೇಶ್ವರ ನಗರ, ತಾ : ಹಾನಗಲ್ಲ ಇವರು ಕಳೆದ 10 ವರ್ಷಗಳಿಂದ ಹಿಂದೂ ಹುಡುಗರ ಗುಂಪು ಕಟ್ಟಿಕೊಂಡು, ಜಾನುವಾರುಗಳ ಸಾಗಾಟದ ಮೇಲೆ ದಾಳಿ ಮಾಡುವುದು, ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗರು ಇದ್ದಾಗ ದಾಳಿ ಮಾಡುವುದು, ಲವ್ ಜಿಹಾದ್ ಅಂತ ಪ್ರತಿಭಟನೆ, ಗಲಾಟೆ ಮಾಡುವುದು ಮಾಡುತ್ತಾ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟು ಮಾಡುವ ಸ್ವಭಾವದವನಾಗಿರುತ್ತಾನೆ ಎಂದು ದೂರು ನೀಡಿರುತ್ತಾರೆ . ಈ ಕಾರಣಗಳು ಸತ್ಯಕ್ಕೆ ದೂರವಾಗಿದ್ದು, ಹಿಂದುತ್ವದ ವಿಚಾರವನ್ನು ಪ್ರಚಾರ ಮಾಡುತ್ತಿರುವ ಅನೇಕರ ಸದ್ದನ್ನು ಗಡಿಪಾರು ನೋಟೀಸ್ ಮೂಲಕ ಹತ್ತಿಕುವ ಯತ್ನ ನಡೆಸಲಾಗುತ್ತಿದೆ.

ಈ ಸಂಬಂಧ ಹಾನಗಲ್ಲ ಮತ್ತು ಆಡೂರ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ.

​ಆದೇಶ: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 135(3) ಅನ್ವಯ, ವಿಚಾರಣೆ ಮುಗಿಯುವವರೆಗೆ ಸಮಾಜದಲ್ಲಿ ಶಾಂತಿ ಕಾಪಾಡುವ ಬಗ್ಗೆ ರೂ. 2,00,000/- (ಎರಡು ಲಕ್ಷ ರೂಪಾಯಿ) ಮೌಲ್ಯದ ಮುಚ್ಚಳಿಕೆಯನ್ನು ಬರೆದುಕೊಡಲು ಆದೇಶಿಸಲಾಗಿದೆ. ಹಾಗೂ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಸಮಜಾಯಿಷಿ ನೀಡಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಮತಾಂತರ,ಗೋರಕ್ಷಣೆ, ಲವ್ ಜಿಹಾದ್ ನಂತಹ ಪ್ರಕರಣಗಳು ಸಾಮಾಜಿಕ ಪಿಡುಗು ಆಗಿದ್ದು ಜಿಲ್ಲೆಯಲ್ಲಿ ಮಿತಿಮೀರಿದ್ದು ಇವುಗಳ ವಿರುದ್ಧ ಹೋರಾಟ ಮಾಡುವ ಕಾರ್ಯಕರ್ತರನ್ನು ಗುರಿಯಾಗಿಸಿ ರಾಜಕೀಯ ಒತ್ತಡದಿಂದ ಈ ರೀತಿ ಗಡಿಪಾರು ನೋಟೀಸ್ ನೀಡಲಾಗುತ್ತಿದೆ ಎಂದು ಜಿಲ್ಲೆಯ ಅನೇಕ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀ ಶ್ರೀಕಾಂತ ಹೊಸಕೆರೆ
ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ ಸಹಸಂಯೋಜಕರು

ಪುತ್ತೂರು : ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆಗೆ ಚಾಲನೆ

ಪುತ್ತೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ರವರು ಜೂನ್ 18, ಗುರುವಾರ ಬೆಳಗ್ಗೆ 9.30 ಕ್ಕೆ ಕಬಕ ನಿಲ್ದಾಣಕ್ಕೆ ಭೇಟಿ ನೀಡುವರು.

ಅವರು ಪುತ್ತೂರು ಕ್ಷೇತ್ರದ ಹಲವು ಕಾಮಗಾರಿಗಳ ವೀಕ್ಷಣೆ ಮಾಡಲಿರುವರು. ಜೊತೆಗೆ ರೈಲ್ವೆ ಕಾಮಗಾರಿ ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ.

ಸುಮಾರು 4.5 ಕೋತಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ರೈಲ್ವೆ ನಿಲ್ದಾಣದ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಕ್ಷೇತ್ರದ ಬೇರೆ ಬೇರೆ ಕಡೆ ಸಂಸದರ ನಿಧಿಯ ಕಾಮಗಾರಿಗಳಿಗೆ ಶೀಲಾನ್ಯಾಸಗಯ್ಯಲಿದ್ದಾರೆ.

ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಸತೀಶ್ ಶೆಟ್ಟಿ ಯವರ ದಿಟ್ಟ ನಡೆಗೆ ಮಡ್ಯಾರು ಶ್ರೀ ರಾಮಾಶ್ರಯ ರಸ್ತೆ ಕಾಂಕ್ರೀಟಿಕರಣ ಪೂರ್ಣ

ಕೋಟೆಕಾರು ಪಟ್ಟಣ ಪಂಚಾಯತ್ ಮಡ್ಯಾರ್ ರಾಮಾಶ್ರಯ ನಿವಾಸಿಗಳು ರಸ್ತೆ ದುರಸ್ಥಿ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರ ಬಳಿ ಮನವಿ ಮಾಡಿದ ಕಾರಣ ಅಧ್ಯಕ್ಷ ನೆಲೆಯಲ್ಲಿ ರಸ್ತೆ ನಿರ್ಮಾಣ ಮಾಡಲು 5 ಲಕ್ಷ ರೂಪಾಯಿ ಅನುದಾನ ಇಟ್ಟಿರುತ್ತಾರೆ ಇದನ್ನು ಸಹಿಸದ ಶಾಸಕರ ಬೆಂಬಲಿಗರು ಎಲ್ಲಾ ಧರ್ಮದವರು ಸಂಚಾರ ನಡೆಸುವ ರಸ್ತೆಗೆ ಕೋಮು ಬಣ್ಣ ಹಚ್ಚಿ ರಸ್ತೆ ಕಾಮಗಾರಿ ತಡೆಯುವ ಯತ್ನ ನಡೆಸಿರುತ್ತಾರೆ.


ಇದು ವಿಫಲ ಆದಾಗ ಶಾಸಕರ ಬೆಂಬಲಿಗರ ಮೂಲಕ ರಾಮಾಶ್ರಯ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸದಂತೆ ಆ ರಸ್ತೆ ಖಾಸಗಿ ರಸ್ತೆ ಆಗಿದ್ದು ಕಾಮಗಾರಿ ನಡೆಸಬಾರದು ಎಂದು ಪಂಚಾಯತ್ ಗೆ ದೂರು ನೀಡಿರುತ್ತಾರೆ ಆದರೆ ಪಂಚಾಯತ್ ಅಭಿವೃದ್ಧಿ ನಿರ್ಮಾಣ ಕಾಮಗಾರಿ ಕೈಗೊಂಡ ರಸ್ತೆ ಸ್ಥಳವು ಸಾರ್ವಜನಿಕ ರಸ್ತೆ ಆದ ಕಾರಣ ಕಾಮಗಾರಿ ನಿಲ್ಲಿಸಲು ವಿಫಲ ಆಗಿರುತ್ತಾರೆ.


ಇವರ ರಾಜಕೀಯ ಕುತಂತ್ರ ಯಾವುದೇ ಫಲ ನೀಡದ ಕಾರಣ ಅಧ್ಯಕ್ಷರು ನಡೆಸುವ ಕಾಮಗಾರಿಯಿಂದ ಹತಾಶೆ ಗೊಂಡು ಸ್ಥಳೀಯ ಕಾಂಗ್ರೆಸ್ ಶಾಸಕರ ಆಪ್ತ ಸಹಾಯಕರ ಮೂಲಕ ಕಾಮಗಾರಿ ನಿಲ್ಲಿಸಲು ಯೋಜನಾ ನಿರ್ದೇಶಕರು ರವರಿಗೆ ಕರೆ ಮಾಡಿ ತಿಳಿಸಿ ಮುಖ್ಯಾಧಿಕಾರಿ ಯವರಿಗೆ ಒತ್ತಡ ಹಾಕಿರುತ್ತಾರೆ ಈ ಬಗ್ಗೆ ಅಧ್ಯಕ್ಷರ ಬಳಿ ಕಾಮಗಾರಿ ನಿಲ್ಲಿಸಲು ಮುಖ್ಯಾಧಿಕಾರಿಯವರು ಮೌಖಿಕವಾಗಿ ತಿಳಿಸಿದಾಗ ಅಧ್ಯಕ್ಷರು ಕಾಮಗಾರಿ ನಿಲ್ಲಿಸಲು ಯೋಜನಾ ನಿರ್ದೇಶಕರು ಅಥವಾ ಮುಖ್ಯಾಧಿಕಾರಿಯವರು ಲಿಖಿತ ರೂಪದಲ್ಲಿ ಕೊಡಲಿ ಕಾಮಗಾರಿ ನಿಲ್ಲಿಸಲು ಗುತ್ತಿಗೆ ದಾರರಿಗೆ ಸೂಚಿಸುತ್ತೇನೆ ಎಂದು ತಿಳಿಸಿದಾಗ ಆ ಪ್ರಯತ್ನ ಕೂಡ ವಿಫಲವಾದಾಗ ಹತಾಶೆ ಗೊಂಡ ಶಾಸಕರ ಬೆಂಬಲಿಗರು ಬೇರೆ ದಾರಿ ಇಲ್ಲದೆ ಬಾಕಿ ಉಳಿದ ಅವರ ಬೆಂಬಲಿಗರೇ ಖಾಸಗಿ ರಸ್ತೆ ಎಂದು ಆಕ್ಷೆಪನೆ ನೀಡಿದ ಅದೇ ರಸ್ತೆಗೆ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಶಾಸಕರ ಮೂಲಕ ಸೂಚಿಸಿರುತ್ತಾರೆ.
ಆದರೆ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಅಧ್ಯಕ್ಷರು ಕ್ರಿಯಾ ಯೋಜನೆ ಅಗಲಿಲ್ಲ ಟೆಂಡರ್ ಆಗಲಿಲ್ಲ, ದಾನ ಪತ್ರ ಆಗಲಿಲ್ಲ ಎಂದು ಯಾವುದೇ ಸಣ್ಣ ಪುಟ್ಟ ರಾಜಕೀಯ ಮಾಡದ ಕಾರಣ ರಾಮಾಶ್ರಯ ರಸ್ತೆ ಕಾಮಗಾರಿ ಪೂರ್ಣಗೊಂಡಿರುತ್ತದೆ.

ಈ ಕೆಲಸ ವನ್ನು ಶಾಸಕರು ಮೊದಲಿಗೆ ಮಾಡಿದ್ದರೆ ಈ ಎಲ್ಲಾ ಗೊಂದಲ ಆಗ್ತಾ ಇರಲಿಲ್ಲ ಶಾಸಕರು ಪಂಚಾಯತ್ ಅಧ್ಯಕ್ಷರ ಬಳಿ ತಕರಾರು ಮಾಡಲು ಹೋಗಿ ಕೊನೆಗೆ ಬೇರೆ ದಾರಿ ಇಲ್ಲದೇ ಯಾವುದೇ ಅನುದಾನ ಇಡದೆ ಟೆಂಡರ್ ಕರೆಯದೆ ತುರ್ತಾಗಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚನೆ ನೀಡಿರುತ್ತಾರೆ.
ಶಾಸಕರು ಹಾಗೂ ಅವರ ಬೆಂಬಲಿಗರ ಈ ಕ್ಷುಲ್ಲಕ ರಾಜಕೀಯಕ್ಕೆ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರು ಮಣಿಯದೆ ದಿಟ್ಟ ನಿರ್ಧಾರ ಕೈಗೊಂಡ ಕಾರಣ ರಾಮಾಶ್ರಯ ರಸ್ತೆಯ ಕಾಮಗಾರಿ ಸಂಪೂರ್ಣಗೊಂಡಿರುವುದು ಸಂತಸದ ವಿಷಯವಾಗಿದೆ. ರಾಮಾಶ್ರಯ ರಸ್ತೆ ನಿರ್ಮಾಣ ಕಾಮಗಾರಿಗೆ ಸಹಕರಿಸಿದ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಎಲ್ಲಾ ಸಂಬಂಧಪಟ್ಟವರಿಗೆ ಹೃತ್ಪೂರ್ವಕ ಧನ್ಯವಾದಗಳು.

ರಾಮಾಶ್ರಯ ರಸ್ತೆ ನಿವಾಸಿಗಳು
ವಾರ್ಡ್ ಸಂಖ್ಯೆ 11 ಮಡ್ಯಾರು

ಫಿಫಾ ವಿಶ್ವಕಪ್, ಎಂಬಾಪೆಯಿಂದ ಹೊಸ ದಾಖಲೆ : ಜಯಭೇರಿ ಬಾರಿಸಿದ ಫ್ರಾನ್ಸ್

2026ರ ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ ತಂಡವು ಸೆನೆಗಲ್ ವಿರುದ್ಧ 3-1 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಕೈಲಿಯನ್ ಎಂಬಾಪೆ ಎರಡು ಗೋಲುಗಳನ್ನು ಗಳಿಸುವ ಮೂಲಕ ಮಿಂಚಿದರು. ಈ ಸಾಧನೆಯೊಂದಿಗೆ ಎಂಬಾಪೆ ಫ್ರಾನ್ಸ್ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದು, ಲಿಯೋನೆಲ್ ಮೆಸ್ಸಿಯ ವಿಶ್ವಕಪ್ ಗೋಲುಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.

2026ರ ಫಿಫಾ ವಿಶ್ವಕಪ್‌ನ ಪಂದ್ಯದಲ್ಲಿ ಫ್ರಾನ್ಸ್ ತಂಡವು ಸೆನೆಗಲ್ ವಿರುದ್ಧ 3-1 ಗೋಲುಗಳ ಜಯವನ್ನು ತನ್ನದಾಗಿಸಿಕೊಂಡಿತು.

ಕೈಲಿಯನ್ ಎಂಬಾಪೆ ಅವರು ಈ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸಿ ಗಮನ ಸೆಳೆದರು.

ಎಂಬಾಪೆ ಫ್ರಾನ್ಸ್ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು.

ತಮ್ಮ 13 ಮತ್ತು 14ನೇ ಗೋಲುಗಳೊಂದಿಗೆ ಎಂಬಾಪೆ ಲಿಯೋನೆಲ್ ಮೆಸ್ಸಿಯ 13 ವಿಶ್ವಕಪ್ ಗೋಲುಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪಂದ್ಯದ 66ನೇ ನಿಮಿಷದಲ್ಲಿ ಎಂಬಾಪೆ ಮೊದಲ ಗೋಲನ್ನು ದಾಖಲಿಸಿದರೆ, 82ನೇ ನಿಮಿಷದಲ್ಲಿ ಬಾಕೋಲಾ ಮತ್ತೊಂದು ಗೋಲನ್ನು ಗಳಿಸಿದರು. ನಂತರ ಎಂಬಾಪೆ ಕೂಡ ಇನ್ನೊಂದು ಗೋಲು ಗಳಿಸಿದರು.