ತಮಿಳುನಾಡು :ಹೊಸ ಸರಕಾರದಿಂದ ಮತ್ತೆ ಮೇಕೆದಾಟು ಕಿರಿಕಿರಿ

ತಮಿಳುನಾಡಿನ ವಿಜಯ್ ನೇತೃತ್ವದ ಹೊಸ ಸರ್ಕಾರವು ಕರ್ನಾಟಕದ ಮೇಕೆದಾಟು ಯೋಜನೆಯನ್ನು ವಿರೋಧಿಸಲು ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.


​ತಮಿಳುನಾಡಿನ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಆಳೇಕರ್ ಅವರು, ಕಾವೇರಿ ನದಿ ತಮಿಳುನಾಡಿನ ರೈತರ ಜೀವನಾಡಿಯಾಗಿದ್ದು, ಕರ್ನಾಟಕದ ಯೋಜನೆಯು ರೈತರಿಗೆ ತೊಂದರೆ ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
​ ಅದೇ ಸಮಯದಲ್ಲಿ, ಮೇಕೆದಾಟು ಯೋಜನೆಯು ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಕರ್ನಾಟಕದ ದೃಷ್ಟಿಕೋನವನ್ನು ವ್ಯಕ್ತಪಡಿಸಲಾಗಿದೆ. ತಮಿಳುನಾಡಿನ ರೈತರ ಹಿತಾಸಕ್ತಿಗೆ ವಿರುದ್ಧವಾದ ಕರ್ನಾಟಕ ಮೇಕೆದಾಟು ಯೋಜನೆಯನ್ನು ಸ್ಥಗಿತಗೊಳಿಸಲು ಕೈಗೊಳ್ಳಬಹುದಾದ ಎಲ್ಲಾ ಕಾನೂನಾತ್ಮಕ ಪ್ರಯತ್ನಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
​ ಕಾವೇರಿ ನದಿ ಪಾತ್ರದ ರೈತರು ಕಾವೇರಿ ನದಿ ನೀರನ್ನು ಬಳಸುವ ಹಕ್ಕು ಹೊಂದಿದ್ದಾರೆಯೆಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ಕರ್ನಾಟಕ ಸರ್ಕಾರ ತಮಿಳುನಾಡಿಗೆ ಸಿಗಬೇಕಾದ ಕಾವೇರಿ ನೀರಿನ ಪಾಲನ್ನು ಸರಿಯಾಗಿ ನೀಡದೇ ಕೇವಲ ಹೆಚ್ಚುವರಿ ನೀರನ್ನು ಮಾತ್ರ ಪ್ರತಿ ವರ್ಷ ಹರಿಸುತ್ತದೆ.


ಇದಕ್ಕೆ ಉತ್ತರಿಸಿರುವ ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ​ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಅನುಕೂಲ, ಅವರ ಪಾಲಿನ ನೀರನ್ನು ಅವರಿಗೆ ಕೊಟ್ಟೆ ಕೊಡುತ್ತೇವೆ. ತಮಿಳುನಾಡು, ಕರ್ನಾಟಕದ ಜನರೆಲ್ಲರೂ ಭಾರತೀಯರು. ಹಾಗಾಗಿ ಯಾವಾಗ ಬೇಕಾದರೂ ಮಾತುಕತೆಗೆ ಸಿದ್ಧ… ಎಂದು ಹೇಳಿದರು.

ಸರಕಾರದ ಹಿಂದೂ ದಮನಕಾರಿ ಧೋರಣೆ….ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಿಗೆ ಗಡಿಪಾರು ನೋಟೀಸ್

ಹರೀಶ ತಂದೆ ನಿಂಗಪ್ಪ ಹಾನಗಲ್ಲ, ಸಾ : ಅಕ್ಕಿಆಲೂರ ಚನ್ನವೀರೇಶ್ವರ ನಗರ, ತಾ : ಹಾನಗಲ್ಲ ಇವರು ಕಳೆದ 10 ವರ್ಷಗಳಿಂದ ಹಿಂದೂ ಹುಡುಗರ ಗುಂಪು ಕಟ್ಟಿಕೊಂಡು, ಜಾನುವಾರುಗಳ ಸಾಗಾಟದ ಮೇಲೆ ದಾಳಿ ಮಾಡುವುದು, ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗರು ಇದ್ದಾಗ ದಾಳಿ ಮಾಡುವುದು, ಲವ್ ಜಿಹಾದ್ ಅಂತ ಪ್ರತಿಭಟನೆ, ಗಲಾಟೆ ಮಾಡುವುದು ಮಾಡುತ್ತಾ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟು ಮಾಡುವ ಸ್ವಭಾವದವನಾಗಿರುತ್ತಾನೆ ಎಂದು ದೂರು ನೀಡಿರುತ್ತಾರೆ . ಈ ಕಾರಣಗಳು ಸತ್ಯಕ್ಕೆ ದೂರವಾಗಿದ್ದು, ಹಿಂದುತ್ವದ ವಿಚಾರವನ್ನು ಪ್ರಚಾರ ಮಾಡುತ್ತಿರುವ ಅನೇಕರ ಸದ್ದನ್ನು ಗಡಿಪಾರು ನೋಟೀಸ್ ಮೂಲಕ ಹತ್ತಿಕುವ ಯತ್ನ ನಡೆಸಲಾಗುತ್ತಿದೆ.

ಈ ಸಂಬಂಧ ಹಾನಗಲ್ಲ ಮತ್ತು ಆಡೂರ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ.

​ಆದೇಶ: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 135(3) ಅನ್ವಯ, ವಿಚಾರಣೆ ಮುಗಿಯುವವರೆಗೆ ಸಮಾಜದಲ್ಲಿ ಶಾಂತಿ ಕಾಪಾಡುವ ಬಗ್ಗೆ ರೂ. 2,00,000/- (ಎರಡು ಲಕ್ಷ ರೂಪಾಯಿ) ಮೌಲ್ಯದ ಮುಚ್ಚಳಿಕೆಯನ್ನು ಬರೆದುಕೊಡಲು ಆದೇಶಿಸಲಾಗಿದೆ. ಹಾಗೂ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಸಮಜಾಯಿಷಿ ನೀಡಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಮತಾಂತರ,ಗೋರಕ್ಷಣೆ, ಲವ್ ಜಿಹಾದ್ ನಂತಹ ಪ್ರಕರಣಗಳು ಸಾಮಾಜಿಕ ಪಿಡುಗು ಆಗಿದ್ದು ಜಿಲ್ಲೆಯಲ್ಲಿ ಮಿತಿಮೀರಿದ್ದು ಇವುಗಳ ವಿರುದ್ಧ ಹೋರಾಟ ಮಾಡುವ ಕಾರ್ಯಕರ್ತರನ್ನು ಗುರಿಯಾಗಿಸಿ ರಾಜಕೀಯ ಒತ್ತಡದಿಂದ ಈ ರೀತಿ ಗಡಿಪಾರು ನೋಟೀಸ್ ನೀಡಲಾಗುತ್ತಿದೆ ಎಂದು ಜಿಲ್ಲೆಯ ಅನೇಕ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀ ಶ್ರೀಕಾಂತ ಹೊಸಕೆರೆ
ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ ಸಹಸಂಯೋಜಕರು

ಕರ್ನಾಟಕ ಸರಕಾರದಿಂದ ಮೃತ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ

ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ, ಮೃತಪಟ್ಟ 68,776 ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗಿರುವುದು ಪತ್ತೆಯಾಗಿದೆ.ಈ ರೀತಿಯಾಗಿ ಸುಮಾರು 79,75,66,000 ರೂಪಾಯಿಗಳಷ್ಟು ಸರ್ಕಾರಿ ಹಣ ಪೋಲಾಗಿರುವುದು ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಹಣದ ದುರುಪಯೋಗವನ್ನು ತಡೆಯಲು ಸರ್ಕಾರ ಯೋಜನೆಯನ್ನು ಪರಿಷ್ಕರಿಸಲು ಮುಂದಾಗಿದೆ. ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಮತ್ತು ಹಂತ ಹಂತವಾಗಿ ಹಣವನ್ನು ವಾಪಸ್ ಪಡೆಯಲಾಗುತ್ತಿದೆ. ಒಟ್ಟು 92 ಬ್ಯಾಂಕ್ ಖಾತೆಗಳಿಗೆ ಮಹಿಳೆಯ ಮರಣದ ನಂತರವೂ ಹಣ ಪಾವತಿಯಾಗಿದೆ.

ಮೃತಪಟ್ಟ ಮಹಿಳೆಯರ ಖಾತೆಗೆ ಜಮೆಯಾದ ಹಣವನ್ನು ವಾಪಸ್ ಪಡೆಯುವ ಕುರಿತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಬ್ಯಾಂಕ್ ಆಡಳಿತ ಮಂಡಳಿಯವರು ಸಭೆ ನಡೆಸಿದ್ದಾರೆ.

ಉಡುಪಿ : ಅನಂತ್ ಅಂಬಾನಿಯಿಂದ ಪ್ರಮುಖ ದೇವಾಲಯಗಳ ಭೇಟಿ

ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ಭಾನುವಾರ ರಾತ್ರಿ ಉಡುಪಿಯ ಐತಿಹಾಸಿಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಕುಟುಂಬದ ಗುರೂಜಿಯೊಂದಿಗೆ ಆಗಮಿಸಿದ್ದ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಿದರು.

​ಕೊಲ್ಲೂರು ಮೂಕಾಂಬಿಕೆಯ ದರ್ಶನದ ನಂತರ, ಅನಂತ್ ಅಂಬಾನಿ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೂ ಭೇಟಿ ನೀಡಿದರು. ಮಠದ ಆಡಳಿತ ಮಂಡಳಿಯಿಂದ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದ ಅವರು, ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಪರ್ಯಾಯ ಶೀರೂರು ಮಠದ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಗಡಾಯಿಕಲ್ಲು ಚಾರಣ ಮಳೆಯಿಂದಾಗಿ ಮತ್ತೆ ನಿಷೇಧ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಪ್ರವಾಸಿ ತಾಣ, ಚಾರಣ ಪ್ರಿಯರ ತಾಣ, ಗಡಾಯಿಕಲ್ಲುಗೆ ಅರಣ್ಯ ಇಲಾಖೆ ಮತ್ತೆ ನಿರ್ಬಂಧ ವಿಧಿಸಿದೆ.

ಮುಂಗಾರು ಮಳೆಯ ತೀವ್ರತೆಯಿಂದಾಗಿ ಚಾರಣ ಮಾರ್ಗದಲ್ಲಿ ಕಲ್ಲುಗಳು ಜಾರುವ ಅಪಾಯವಿರುವುದರಿಂದ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆಯು ಜೂನ್ 14ರಿಂದ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಿದೆ.

​ಈ ಹಿಂದೆ ಬೇಸಿಗೆಯ ಕಾಡ್ಗಿಚ್ಚು ಮತ್ತು ಹುಲಿ ಗಣತಿ ಕಾರಣಕ್ಕೆ ನಿಷೇಧವಿದ್ದ ಗಡಾಯಿಕಲ್ಲನ್ನು ಜೂನ್ 1ರಂದು ಪ್ರವಾಸಿಗರಿಗಾಗಿ ಮತ್ತೆ ತೆರೆಯಲಾಗಿತ್ತು. ಈ ಅಲ್ಪಾವಧಿಯಲ್ಲೇ (ಜೂನ್ 7ರಂದು) ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು.

​ಈ ನಿಷೇಧವು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದ್ದು, ಹವಾಮಾನ ಪರಿಸ್ಥಿತಿ ಸುಧಾರಿಸಿದ ನಂತರವೇ ಚಾರಣಕ್ಕೆ ಅವಕಾಶ ನೀಡುವ ಕುರಿತು ಅರಣ್ಯ ಇಲಾಖೆ ತೀರ್ಮಾನಿಸಲಿದೆ.

ಸರಕಾರದ ಗ್ಯಾರಂಟಿ ಯೋಜನೆಗಳು ಪರಿಷ್ಕರಣೆಯಿಂದ ರದ್ದಾಗಲಿವೆ. – ಮಾಜಿ ಸಚಿವ ಬಿ. ಶ್ರೀರಾಮುಲು

ರಾಜ್ಯ ಬಿಜೆಪಿ ಕಾರ್ಯಲಯ, ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾಜಿ ಸಚಿವ ಬಿ ಶ್ರೀರಾಮುಲು ಸಭೆ ನಡೆಸಿದರು. ಗ್ಯಾರಂಟಿ ಯೋಜನೆಗಳೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಬಗ್ಗೆ ಅಸಮಾಧಾನ ಹೊರಹಾಕಿ ಮಾತನಾಡುತ್ತಿದ್ದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬರಲು ಸುಳ್ಳು ಭರವಸೆ ನೀಡಿ ಗ್ಯಾರಂಟಿಗಳನ್ನು ಘೋಷಿಸಿತ್ತು. ಈಗ ಅವುಗಳನ್ನು ಪರಿಷ್ಕರಣೆ ಅಥವಾ ಸ್ಥಗಿತಗೊಳಿಸುವ ಹುನ್ನಾರ ನಡೆಸುತ್ತಿದೆ. ಜನರು ಕೇಳದಿದ್ದರೂ ರಾಜಕೀಯ ಸ್ವಾರ್ಥಕ್ಕಾಗಿ ಈ ಯೋಜನೆಗಳನ್ನು ಜಾರಿಗೊಳಿಸಿ, ಇದೀಗ ಅವ್ಯವಸ್ಥೆಯಿಂದಾಗಿ ಅವುಗಳನ್ನು ನಿಲ್ಲಿಸಲು ಮುಂದಾಗಿದೆ. ಸರ್ಕಾರ ಕೂಡಲೇ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಗೃಹಲಕ್ಷ್ಮಿ ಯೋಜನೆಯ ಹಣ ಮೃತ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗುತ್ತಿರುವುದು ಸೇರಿದಂತೆ ಹಲವು ಲೋಪಗಳು ನಡೆದಿವೆ. ಈ ಯೋಜನೆಯಲ್ಲಿ ಅಕ್ರಮಗಳು ನಡೆಯುತ್ತಿರುವುದನ್ನು ಸರ್ಕಾರವೇ ಸದನದಲ್ಲಿ ಒಪ್ಪಿಕೊಂಡಿದೆ ಎಂದು ದೂರಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ಶೀತಲ ಸಮರ ನಡೆಯುತ್ತಿತ್ತು. ಈಗ ಶಿವಕುಮಾರ್ ಅವರು ಸಿಎಂ ಆದ ನಂತರ ಸಚಿವ ಸಂಪುಟಕ್ಕಾಗಿ ಕಚ್ಚಾಟ ಆರಂಭವಾಯಿತು. ಸರ್ಕಾರವು ರಾಹುಲ್ ಗಾಂಧಿ ಅವರ ಮೇಲೆಯೇ ನಿಂತಿದ್ದು, ಸಚಿವರ ನಡುವೆ ಖಾತೆಗಳ ಹಂಚಿಕೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ಮತ್ತು ಕಚ್ಚಾಟಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಷಡ್ಯಂತ್ರ ಮತ್ತು ಹಿಂದೂ ಧಾರ್ಮಿಕ ಸ್ಥಳಗಳಿಗೆ ತೊಂದರೆ ನೀಡುವ ಪ್ರಯತ್ನದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಸಮರ್ಪಣಾ ಯಾತ್ರೆಯ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಕಚ್ಚಿದ ಸೇಬನ್ನು ಜನರಿಗೆ ಎಸೆದಿದ್ದನ್ನು ಪ್ರಸ್ತಾಪಿಸಿ, ಇದು ಜನರಿಗೆ ಅಗೌರವ ತೋರುವಂತಹ ಕೃತ್ಯ ಎಂದು ಟೀಕಿಸಿದರು.

​ಒಟ್ಟಾರೆಯಾಗಿ, ರಾಜ್ಯ ಸರ್ಕಾರವು ಗ್ಯಾರಂಟಿಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಮತ್ತು ಸರ್ಕಾರದ ಆಂತರಿಕ ಕಲಹದಿಂದಾಗಿ ರಾಜ್ಯದ ಆಡಳಿತ ಹದಗೆಟ್ಟಿದೆ ಎಂದು ಶ್ರೀರಾಮುಲು ಅವರು ಟೀಕಿಸಿದ್ದಾರೆ.

ಇಂದು ಕರ್ನಾಟಕಕ್ಕೆ ಭೇಟಿ ನೀಡಲಿರುವ ತಮಿಳುನಾಡಿನ ಮುಖ್ಯಮಂತ್ರಿ : ಕೊಲ್ಲೂರಿನಲ್ಲಿ ಬಿಗಿ ಭದ್ರತೆ

ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರಿಗೆ ಪ್ರತಿಭಟನೆಯ ಬಿಸಿ ಎದುರಾಗಿದ್ದು, ದೇವಸ್ಥಾನದ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಪ್ರಕಾರ, ಜಿಲ್ಲಾ ಪೊಲೀಸರು ಸಂಪೂರ್ಣ ಬಂದೋಬಸ್ತ್ ಒದಗಿಸಿದ್ದಾರೆ. ತಮಿಳುನಾಡಿನ ಡಿಐಜಿ ಮತ್ತು ಎಸ್ಪಿ ಸೇರಿದಂತೆ ಸುಮಾರು 40 ಮಂದಿ ಸಿಎಂ ಅವರ ಭದ್ರತಾ ತಂಡದಲ್ಲಿದ್ದಾರೆ.ಸಿಎಂ ಅವರಿಗೆ ‘ಝಡ್ ಪ್ಲಸ್’ ಭದ್ರತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದ್ದು, ಪೂರ್ವಭ್ಯಾಸವನ್ನೂ ನಡೆಸಲಾಗಿದೆ.

ಸಿಎಂ ಯಾವುದೇ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಿಲ್ಲ, ಆದರೂ ಅವರು ಸಂಚರಿಸುವ ಮಾರ್ಗ ಹಾಗೂ ದೇವಸ್ಥಾನದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವಿಲ್ಲ, ಆದರೆ ಸಿಎಂ ಭೇಟಿಯ ಕಾರಣದಿಂದ ದರ್ಶನಕ್ಕೆ ಸ್ವಲ್ಪ ಅನಾನುಕೂಲವಾಗಬಹುದು. ವಿವಿಐಪಿ ವಾಹನ ಸಂಚಾರದ ಹಾದಿಯಲ್ಲಿ ಅಥವಾ ದೇವಸ್ಥಾನದ ಆವರಣದಲ್ಲಿ ಜನರು ಗುಂಪು ಸೇರದಂತೆ ಸೂಚಿಸಲಾಗಿದೆ.

ಗೋರಕ್ಷಕರ ಪರವಾಗಿ ಕಾನೂನು ಹೋರಾಟ: ನ್ಯಾಯವಾದಿ ಕುಮಾರಗೌಡ ಪಾಟೀಲ್ ಅವರಿಗೆ ಹಾವೇರಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಹರೀಶ್ ಹಾನಗಲ್ಲರಿಂದ ಧನ್ಯವಾದ

ಗೋವಿನ ರಕ್ಷಣೆ ಮಾಡಲು ಹೋದ ಹಿಂದೂ ಜಾಗರಣ ವೇದಿಕೆ ಹಾವೇರಿ ಜಿಲ್ಲೆಯ ಕಾರ್ಯಕರ್ತರ ಮೇಲೆ ಮತಾಂಧ ಶಕ್ತಿಗಳ ರಾಜಕೀಯ ಪ್ರಭಾವದಿಂದ ದಾಖಲಿಸಿದ್ದ ಸುಳ್ಳು ಮೊಕದ್ದಮೆಗೆ ಮಾನ್ಯ ಜಿಲ್ಲಾ ನ್ಯಾಯಾಲಯದಿಂದ ಎಲ್ಲಾ ಕಾರ್ಯಕರ್ತರಿಗೂ ಯಾವುದೇ ಅಪೇಕ್ಷೆ ಇಲ್ಲದೆ ಎಲ್ಲಾ ಕಾರ್ಯಕರ್ತರಿಗೆ ಕಾನೂನಿನ ನೆರವು ನೀಡಿ ಜಾಮೀನು ಮಂಜೂರು ಮಾಡಿಸಿದ ವಕೀಲರಾದ ಶ್ರೀ ಕುಮಾರಗೌಡ ಪಾಟೀಲ್ ನ್ಯಾಯವಾದಿಗಳು ಹೈಕೋರ್ಟ್ ಧಾರವಾಡ ಇವರಿಗೆ ಸಂಘಟನೆ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಹಾವೇರಿ ಜಿಲ್ಲಾ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಶ್ರೀ ಹರೀಶ್ ಹಾನಗಲ್ಲ ತಿಳಿಸಿದರು

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ: ಕೇಂದ್ರ ಸಚಿವರ ಜೊತೆ ಮಾತುಕತೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕೇಂದ್ರ ಇಂಧನ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ, ಬೆಂಗಳೂರಿನ ಪ್ರಮುಖ ಮೆಟ್ರೋ ಮತ್ತು ಸಾರಿಗೆ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ ಕೋರಿದ್ದಾರೆ.

ಪ್ರಮುಖ ಬೇಡಿಕೆಗಳು:

  • ಮೆಟ್ರೋ ಮೂರನೇ ಹಂತ (ಡಬಲ್ ಡೆಕ್ಕರ್ ಯೋಜನೆ): 9,700 ಕೋಟಿ ರೂ. ವೆಚ್ಚದ 44.65 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ಯೋಜನೆಗೆ ಬಿಎಂಆರ್‌ಸಿಎಲ್ (BMRCL) ಪ್ರಸ್ತಾಪಿಸಿರುವ ಸಣ್ಣ ಬದಲಾವಣೆಗಳಿಗೆ ಅನುಮತಿ ಕೋರಲಾಗಿದೆ. ಈ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.
  • ಮೆಟ್ರೋ ಎರಡನೇ ಹಂತದ ಪರಿಷ್ಕೃತ ವೆಚ್ಚ: ಈ ಯೋಜನೆಯ ಅಂದಾಜು ವೆಚ್ಚವು ಆರಂಭಿಕ 26,405.14 ಕೋಟಿ ರೂ.ನಿಂದ 40,425.02 ಕೋಟಿ ರೂ.ಗೆ (14,019.88 ಕೋಟಿ ರೂ. ಹೆಚ್ಚಳ) ಏರಿಕೆಯಾಗಿದ್ದು, ಇದಕ್ಕೆ ತುರ್ತಾಗಿ ಅನುಮೋದನೆ ನೀಡುವಂತೆ ಮನವಿ ಮಾಡಲಾಗಿದೆ.
  • ಸರ್ಜಾಪುರ-ಹೆಬ್ಬಾಳ ಮೆಟ್ರೋ ಯೋಜನೆ: 25,999 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯ ಪರಿಷ್ಕೃತ ಡಿಪಿಆರ್ (DPR) ಅನ್ನು ಏಪ್ರಿಲ್ 29, 2026ರಂದು ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಇದಕ್ಕೆ ಶೀಘ್ರ ಅನುಮತಿ ನೀಡಬೇಕೆಂದು ಕೋರಲಾಗಿದೆ.
  • ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS): ಬೆಂಗಳೂರನ್ನು ಮೈಸೂರು, ಕನಕಪುರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರದೊಂದಿಗೆ ಸಂಪರ್ಕಿಸುವ RRTS ಯೋಜನೆಯನ್ನು ಜಾರಿಗೆ ತರಲು ಅನುಮತಿ ಕೋರಲಾಗಿದೆ.

​ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ತ್ವರಿತ ಸ್ಪಂದನೆ ಸಿಗುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

ಬೆಂಗಳೂರು : ಶೀಘ್ರದಲ್ಲೇ ಬಸ್ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಲಭ್ಯ

ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಡಿ ಉಚಿತ ಬಸ್ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ:

ಸ್ಮಾರ್ಟ್ ಕಾರ್ಡ್ ಜಾರಿಯಾದ ಬಳಿಕ, ಪ್ರಯಾಣದ ವೇಳೆ ಬಸ್ ನಿರ್ವಾಹಕರಿಗೆ ಆಧಾರ್ ಕಾರ್ಡ್ ಅಥವಾ ಇನ್ನಾವುದೇ ಗುರುತಿನ ಕಾರ್ಡ್ ಗಳನ್ನು ತೋರಿಸುವ ಅಗತ್ಯವಿರುವುದಿಲ್ಲ. ರಾಜ್ಯದ ಮೂರು ಕೋಟಿಗೂ ಹೆಚ್ಚು ಮಹಿಳಾ ಫಲಾನುಭವಿಗಳಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು.

ಪುರುಷ ಪ್ರಯಾಣಿಕರು ಮೆಟ್ರೋ ಕಾರ್ಡ್ ಮಾದರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ಕಾರ್ಡ್ ಪಡೆಯಬಹುದು. ಇದರಲ್ಲಿ ಮರು ರಿಚಾರ್ಜ್ ಸೌಲಭ್ಯವೂ ಇರಲಿದೆ.

ಸಾರಿಗೆ ಸಚಿವ ಬೈರತಿ ಸುರೇಶ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪ್ರಯಾಣಿಕರ ಗೊಂದಲಗಳನ್ನು ನಿವಾರಿಸಿ ಸೇವೆಯನ್ನು ಸರಳೀಕರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.