ಸರಕಾರದ ಹಿಂದೂ ದಮನಕಾರಿ ಧೋರಣೆ….ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಿಗೆ ಗಡಿಪಾರು ನೋಟೀಸ್
ಹರೀಶ ತಂದೆ ನಿಂಗಪ್ಪ ಹಾನಗಲ್ಲ, ಸಾ : ಅಕ್ಕಿಆಲೂರ ಚನ್ನವೀರೇಶ್ವರ ನಗರ, ತಾ : ಹಾನಗಲ್ಲ ಇವರು ಕಳೆದ 10 ವರ್ಷಗಳಿಂದ ಹಿಂದೂ ಹುಡುಗರ ಗುಂಪು ಕಟ್ಟಿಕೊಂಡು, ಜಾನುವಾರುಗಳ ಸಾಗಾಟದ ಮೇಲೆ ದಾಳಿ ಮಾಡುವುದು, ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗರು ಇದ್ದಾಗ ದಾಳಿ ಮಾಡುವುದು, ಲವ್ ಜಿಹಾದ್ ಅಂತ ಪ್ರತಿಭಟನೆ, ಗಲಾಟೆ ಮಾಡುವುದು ಮಾಡುತ್ತಾ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟು ಮಾಡುವ ಸ್ವಭಾವದವನಾಗಿರುತ್ತಾನೆ ಎಂದು ದೂರು ನೀಡಿರುತ್ತಾರೆ . ಈ ಕಾರಣಗಳು ಸತ್ಯಕ್ಕೆ ದೂರವಾಗಿದ್ದು, ಹಿಂದುತ್ವದ ವಿಚಾರವನ್ನು ಪ್ರಚಾರ ಮಾಡುತ್ತಿರುವ ಅನೇಕರ ಸದ್ದನ್ನು ಗಡಿಪಾರು ನೋಟೀಸ್ ಮೂಲಕ ಹತ್ತಿಕುವ ಯತ್ನ ನಡೆಸಲಾಗುತ್ತಿದೆ.


ಈ ಸಂಬಂಧ ಹಾನಗಲ್ಲ ಮತ್ತು ಆಡೂರ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ.
ಆದೇಶ: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 135(3) ಅನ್ವಯ, ವಿಚಾರಣೆ ಮುಗಿಯುವವರೆಗೆ ಸಮಾಜದಲ್ಲಿ ಶಾಂತಿ ಕಾಪಾಡುವ ಬಗ್ಗೆ ರೂ. 2,00,000/- (ಎರಡು ಲಕ್ಷ ರೂಪಾಯಿ) ಮೌಲ್ಯದ ಮುಚ್ಚಳಿಕೆಯನ್ನು ಬರೆದುಕೊಡಲು ಆದೇಶಿಸಲಾಗಿದೆ. ಹಾಗೂ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಸಮಜಾಯಿಷಿ ನೀಡಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಮತಾಂತರ,ಗೋರಕ್ಷಣೆ, ಲವ್ ಜಿಹಾದ್ ನಂತಹ ಪ್ರಕರಣಗಳು ಸಾಮಾಜಿಕ ಪಿಡುಗು ಆಗಿದ್ದು ಜಿಲ್ಲೆಯಲ್ಲಿ ಮಿತಿಮೀರಿದ್ದು ಇವುಗಳ ವಿರುದ್ಧ ಹೋರಾಟ ಮಾಡುವ ಕಾರ್ಯಕರ್ತರನ್ನು ಗುರಿಯಾಗಿಸಿ ರಾಜಕೀಯ ಒತ್ತಡದಿಂದ ಈ ರೀತಿ ಗಡಿಪಾರು ನೋಟೀಸ್ ನೀಡಲಾಗುತ್ತಿದೆ ಎಂದು ಜಿಲ್ಲೆಯ ಅನೇಕ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶ್ರೀ ಶ್ರೀಕಾಂತ ಹೊಸಕೆರೆ
ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ ಸಹಸಂಯೋಜಕರು
